Close

ಇತಿಹಾಸ

ದಾವಣಗೆರೆ ಜಿಲ್ಲಾ ವಿವರ

ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ 15, 1997ರಂದು ಅಂದಿನ ಮುಖ್ಯಮಂತ್ರಿ ಶ್ರೀ ಜೆ ಹೆಚ್ ಪಟೇಲ್ ಅವರ ನಿರ್ಧಾರದ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು, ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು.

ಪ್ರೇಕ್ಷಣೀಯ ಸ್ಥಳಗಳು

ಕುಂದವಾಡ ಕೆರೆಯು ನಗರದ ಜನರಿಗೆ ಅತ್ಯಂತ ಹತ್ತಿರವಿರುವ ಸ್ಠಳವಾಗಿದೆ. ಹರಿಹರದ ತುಂಗಭದ್ರೆ ಮತ್ತು ಪುರಾತನ ಹರಿಹರೇಶ್ವರ ದೇವಾಲಯ, ಶಾಂತಿಸಾಗರ, ಕೊಂಡಜ್ಜಿಯ ಅರಣ್ಯಧಾಮ, ಪುರಾತನ ಬಾಗಳಿ ಕಲ್ಲೇಶ್ವರ ದೇವಾಲಯ, ನೀಲಗುಂದದ ಭೀಮೇಶ್ವರ ದೇವಾಲಯಗಳು, ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯ ದೇವಾಲಯ,ನಂದಿಗುಡಿ ,ಹಿಂದಿನ ಕಾಲದ ವೃಷಭಮಠ, ಸಂತೇಬೆನ್ನೂರಿನ ಪುರಾತನ ಪುಷ್ಕರಿಣಿ,ದೊಡ್ಡಬಾತಿ ಪವಿತ್ರವನ,ಆನೆಕೊಂಡದ ಪುರಾತನ ಬಸವೇಶ್ವರ ಹಾಗು ಈಶ್ವರ ದೇವಾಲಯ.

 ತುಂಗಭದ್ರ ನದಿ ಹೊನ್ನಾಳಿ ತಾಲ್ಲೂಕಿನಲ್ಲಿ ಹಾದುಹೋಗುತ್ತದೆ ಮತ್ತು ನಂತರ ಪಶ್ಚಿಮದಲ್ಲಿ ಹರಿಹರ ಮತ್ತು ಹರಪನಹಳ್ಳಿ ಗಡಿಗಳಲ್ಲಿ ನೈಸರ್ಗಿಕ ಗಡಿಗಳನ್ನು ರೂಪಿಸುತ್ತದೆ. ದಾವಣಗೆರೆ ಮತ್ತು ಹರಿಹರ ಪಟ್ಟಣಗಳ ಮೂಲಕ ವಿಶಾಲವಾದ ರೈಲು ಮಾರ್ಗ ಹಾದು ಹೋಗುತ್ತವೆ.

1997 ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್‌, ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಡಿಸಿದರು. ಇದಕ್ಕೂ ಮೊದಲು ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುಗಳಲ್ಲೊಂದಾಗಿತ್ತು. ದಾವಣಗೆರೆ ಜಿಲ್ಲೆಯು ಆರು ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.

ತಾಲ್ಲೂಕಿನ ಗ್ರಾಮಗಳು ಮತ್ತು ಪಟ್ಟಣಗಳ ಸಂಖ್ಯೆ, ಪ್ರದೇಶ, ಜನಸಂಖ್ಯೆ, ಸಾಂದ್ರತೆ ದಾವಣಗೆರೆ ಜಿಲ್ಲೆಯಲ್ಲಿ.
ಕ್ರಮ ಸಂಖ್ಯೆ ತಾಲ್ಲೂಕಿನ ಹೆಸರು ಹಳ್ಳಿಗಳಸಂಖ್ಯೆ ಪಟ್ಟಣಗಳಸಂಖ್ಯೆ ಭೌಗೋಳಿಕ ವಿಸ್ತೀರ್ಣ (ಚ.ಕೀ) ಪುರುಷ ಮಹಿಳೆ ಒಟ್ಟು ಪ್ರತಿ ಚದರ ಕಿಲೋ ಮೀಟರಿಗೆ ಸಾಂದ್ರತೆ
1 ದಾವಣಗೆರೆ 172 1 956.58 309642 292881 602523 644
2 ಹರಿಹರ 87 1 484.62 126128 119526 245654 515
3 ಹೊನ್ನಾಳಿ 168 1 884.74 113577 109015 222592 251
4 ಚನ್ನಗಿರಿ 246 1 1170.86 149796 142711 292507 242
5 ಜಗಳೂರು 170 1 963.35 80954 77929 158883 165
  ಒಟ್ಟು 843 5 4460.15 780097 742062 1522159 1817