Close

ಆಡಳಿತಾತ್ಮಕ ವ್ಯವಸ್ಥೆ

ದಾವಣಗೆರೆ ಜಿಲ್ಲೆಯ ಆಡಳಿತಾತ್ಮಕ ವ್ಯವಸ್ಥೆ

ಜಿಲ್ಲೆ ಎನ್ನುವುದು ನಮ್ಮ ದೇಶದಲ್ಲಿ ಒಂದು ತಳಮಟ್ಟದ ಆಡಳಿತಾತ್ಮಕ ಘಟಕವಾಗಿದೆ. ಜಿಲ್ಲೆಯ ಆಡಳಿತಶಾಹಿ ಮತ್ತು ಅದರ ರಚನೆಯುನ್ನು ಶತಮಾನಗಳ ಹಿಂದೆಯೇ ಕಲ್ಪಿಸಿಕೊಳ್ಳಲಾಗಿದೆ ಮತ್ತು ಅದಕ್ಕೊಂದು ಆಕಾರವನ್ನು ನೀಡಲಾಗಿದೆ. ಜಿಲ್ಲೆಯ ಆಡಳಿತದ ಮುಖ್ಯಸ್ಥರು ಭಾರತೀಯ ಆಡಳಿತಾತ್ಮಕ ಸೇವೆಗೆ ಸೇರಿದ ಕಲೆಕ್ಟರ್ / ಜಿಲ್ಲಾ ಮ್ಯಾಜಿಸ್ಟ್ರೇಟ್ / ಜಿಲ್ಲಾಧಿಕಾರಿ ಆಗಿರುತ್ತಾರೆ.

ಜಿಲ್ಲೆಯಲ್ಲಿನ ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳು ವಿವಿಧ ಕ್ರಿಯಾತ್ಮಕ ಇಲಾಖೆಗಳಿಂದ ನಡೆಸಲ್ಪಡುತ್ತವೆಯಾದರೂ ಜಿಲ್ಲೆಯ ಕಾರ್ಯಕಾರಿ ಸಂಯೋಜಕರಾಗಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕರಾಗಿ ಜಿಲ್ಲಾಧಿಕಾರಿಯವರು ಮುಖ್ಯ ಪಾತ್ರವನ್ನು ವಹಿಸುತ್ತಾರೆ.ಜಿಲ್ಲೆಯ ಕಂದಾಯ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿಗಳು ಸರ್ಕಾರದ ಮುಖ್ಯ ಪ್ರತಿನಿಧಿಯಾಗಿರುತ್ತಾರೆ. ಜಿಲ್ಲಾ ದಂಡಾಧಿಕಾರಿಯಾಗಿ ಅವರು ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗೆ ಕಾಪಾಡುವ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಚುನಾವಣಾಧಿಕಾರಿಯಾಗಿ ಜಿಲ್ಲೆಯಲ್ಲಿ ಎಲ್ಲಾ ಚುನಾವಣೆಗಳನ್ನು ಸಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ,

ಜಿಲ್ಲಾಧಿಕಾರಿಯವರ ಕಚೇರಿ
ಜನಪ್ರತಿನಿದಿಗಳು