Close

ಆಸಕ್ತಿಯ ಸ್ಥಳಗಳು

ಪ್ರವಾಸಿ ಆಕರ್ಷಣೆಗಳು

  • ಕುಂದುವಾಡಾ ಸರೋವರ ಮತ್ತು ಗಾಜಿನ ಮನೆ: ದಾವಣಗೆರೆ ನಗರದ  ಜನಪ್ರಿಯ ಪಿಕ್ನಿಕ್ ತಾಣ
  • ಕೊಂಡಜ್ಜಿ:ಹರಿಹರದಿಂದ 15 ಕಿ.ಮೀ ದೂರದಲ್ಲಿರುವ ಒಂದು ಸರೋವರ ಮತ್ತು ಪಿಕ್ನಿಕ್ ತಾಣ.
  • ಶಾಂತಿಸಾಗರ:27 ಚದರ ಕಿ.ಮೀ ಮೇಲ್ಮೈ ವಿಸ್ತೀರ್ಣ ಹೊಂದಿರುವ ಶಾಂತಿಸಾಗರ ಏಷ್ಯಾದ ಎರಡನೇ ಅತಿದೊಡ್ಡ ಸರೋವರ ಎಂದು ಹೇಳಲಾಗುತ್ತದೆ. ಶಾಂತಿಸಾಗರವು ಮಾನವ ನಿರ್ಮಿತ ಸರೋವರವಾಗಿದ್ದು, ಕ್ರಿ.ಶ 11 ಅಥವಾ 12 ನೇ ಶತಮಾನದಲ್ಲಿ ರಾಣಿ ಶಾಂತವ್ವ ನಿರ್ಮಿಸಿದ ಈ ಸರೋವರವನ್ನು ಹಿಂದೆ ‘ಸೂಳೆಕೆರೆ’ ಎಂದು ಕರೆಯಲಾಗುತ್ತಿತ್ತು. ಶಾಂತಿಸಾಗರ ಪಕ್ಕದ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ವೀರಭದ್ರೇಶ್ವರ ದೇವಸ್ಥಾನ, ಕಾಳಿ ದೇವಸ್ಥಾನ, ಶ್ರೀ ಸಿದ್ಧೇಶ್ವರ ದೇವಸ್ಥಾನ ಮತ್ತು ಶ್ರೀ ಕೃಷ್ಣ ದೇವಾಲಯಗಳು ಶಾಂತಿಸಾಗರ ಬಳಿಯ ಪ್ರಮುಖ ದೇವಾಲಯಗಳಾಗಿವೆ. ದೋಣಿ ವಿಹಾರ ಸೌಲಭ್ಯ ಲಭ್ಯವಿದೆ.
  • ಉಚಂಗಿ ದುರ್ಗ:ಕರ್ನಾಟಕದ ಹಳೆಯ ಕೋಟೆಗಳಲ್ಲಿ ಒಂದಾದ ಉಚಂಗಿ ದುರ್ಗದ ಕೆಲವು ಅವಶೇಷಗಳಷ್ಟೇ ಈಗ ಉಳಿದಿವೆ. ಹತ್ತಿರದ ಉಚಮ್ಮ ದೇವಸ್ಥಾನದಿಂದ ಉಚಂಗಿಗೆ ಈ ಹೆಸರು ಬಂದಿದೆ. ಹಳೆಯ ಕೋಟೆ ಅವಶೇಷಗಳಲ್ಲಿ ಹಲವಾರು ದೊಡ್ಡಿ ಬಾಗಿಲುಗಳು ವೀಕ್ಷಣಾ ಗೋಪುರಗಳು ಮತ್ತು ಬುರುಜುಗಳು ಇನ್ನೂ ಹಾಗೇ ಇವೆ. ಉಚಂಗಿ ದುರ್ಗ ಕೋಟೆಯನ್ನು ನಾಲ್ಕನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಇದು ಕದಂಬಗಳು, ಚಾಲುಕ್ಯರು, ಹೈದರ್ ಅಲಿ ಮತ್ತು ನಾಯಕರು ಸೇರಿದಂತೆ ಹಲವಾರು ರಾಜ್ಯಗಳ ಆಳ್ವಿಕೆಯಲ್ಲಿತ್ತು.  ಚಿತ್ರದುರ್ಗದ  ನಾಯಕರ ಅಡಿಯಲ್ಲಿ ಉಚಂಗಿ ದುರ್ಗ ಅತ್ಯಂತ ಸಮೃದ್ಧಿಯನ್ನು ಹೊಂದಿತ್ತು ಎಂದು ನಂಬಲಾಗಿದೆ.
  • ಬೆಳಗುತ್ತಿ :ಕೋಟೆಯ ಅವಶೇಷಗಳು ಮತ್ತು ಹಳೆಯ ಸಿದ್ಧೇಶ್ವರ  ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದೆ. 
  • ಚೆನ್ನಗಿರಿ: ರಾಣಿ ಚೆನ್ನಮ್ಮಾಜಿ ನಿರ್ಮಿಸಿದ ಹಳೆಯ ಬೆಟ್ಟದ ಕೋಟೆಗೆ ಜನಪ್ರಿಯವಾಗಿದೆ. ಬೆಟ್ಟದ ಮೇಲಿನ ಕೋಟೆಯಲ್ಲಿ ಬೇಟೆ ರಂಗನಾಥಸ್ವಾಮಿ ದೇವಾಲಯವಿದೆ ಮತ್ತು ಬೆಟ್ಟದ ಮೇಲಿನ ನೋಟ ರಮಣೀಯವಾಗಿದೆ. 
  • ಹೊನ್ನಾಳಿ:ಹಳೆಯ ಕೋಟೆ ಅವಶೇಷಗಳು ಮತ್ತು ಮಲ್ಲಿಕಾರ್ಜುನ ದೇವಸ್ಥಾನವನ್ನು ಹೊಂದಿದೆ. ಹೊನ್ನಾಳಿಯಲ್ಲಿ ಈ ಹಿಂದೆ ಚಿನ್ನದ ಗಣಿ ಇತ್ತು ಎಂದು ನಂಬಲಾಗಿದೆ.
  • ಕುರುವ ದ್ವೀಪ:ಹೊನ್ನಾಳಿಯಿಂದ ಆಗ್ನೇಯಕ್ಕೆ 10 ಕಿ.ಮೀ ದೂರದಲ್ಲಿರುವ ಕುರುವ ದ್ವೀಪ ತುಂಗಭದ್ರ ನದಿ ಮಧ್ಯದಲ್ಲಿದೆ ಹಾಗು ರಾಮೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಸಂತೆಬೆನ್ನೂರು : 90 ಚದರ ಮೀಟರ್ ವಿಸ್ತೀರ್ಣದ ಕಲಾತ್ಮಕ ಪುಷ್ಕರಿಣಿಗೆ ಜನಪ್ರಿಯವಾಗಿದೆ ಮತ್ತು ಪುಷ್ಕರಿಣಿಯ ಮಧ್ಯದಲ್ಲಿ ವಸಂತ ಮಂಟಪ ಇದೆ.

ಧಾರ್ಮಿಕ ಸ್ಥಳಗಳು

  • ದುರ್ಗಮ್ಮ ಮತ್ತು ವೀರಭದ್ರ ದೇವಾಲಯಗಳು: ದಾವಣಗೆರೆ ಪಟ್ಟಣದ ಎರಡು ಹಳೆಯ ದೇವಾಲಯಗಳಾಗಿವೆ.
  • ಹರಿಹರ:ಹರಿಹರ ತುಂಗಭದ್ರಾ ನದಿಯ ದಡದಲ್ಲಿರುವ ತಾಲ್ಲೂಕು ಕೇಂದ್ರ ಮತ್ತು ದೇವಾಲಯಗಳ  ಪಟ್ಟಣವಾಗಿದೆ. ದಾವಣಗೆರೆ ಮತ್ತು ರಾಣೆಬೆನ್ನೂರು  ನಡುವೆ ಪ್ರಯಾಣಿಸುವಾಗ ಹರಿಹರದ ಮೂಲಕ ಸಾಗಬಹುದು.  ಹರಿಹರೇಶ್ವರ ದೇವಸ್ಥಾನ, ಅಯ್ಯಪ್ಪ ದೇವಸ್ಥಾನ ಹರಿಹರದ ಪ್ರಮುಖ ದೇವಾಲಯಗಳಾಗಿವೆ.
  • ರಾಜನಹಳ್ಳಿ:ಹರಿಹರದಿಂದ 6 ಕಿ.ಮೀ ದೂರದಲ್ಲಿದ್ದು ಬನ್ನಿ ಮಹಾಕಾಳಿ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನ ಮತ್ತು ವಾಲ್ಮೀಕಿ ಗುರುಪೀಠ ಇಲ್ಲಿನ ಪ್ರಮುಖ ಸ್ಥಳಗಳಾಗಿವೆ.
  • ತೀರ್ಥರಾಮೇಶ್ವರ:ಹೊನ್ನಾಳಿ ತಾಲೂಕಿನಲ್ಲಿರುವ ತೀರ್ಥರಾಮೇಶ್ವರ ದೇವಸ್ಥಾನವು ನೈಸರ್ಗಿಕ ಪವಿತ್ರ ನೀರಿನ ಬುಗ್ಗೆಗೆ ಜನಪ್ರಿಯವಾಗಿದೆ. ಬ್ರಹ್ಮ ದೇವರಿಗೆ ಅರ್ಪಿತವಾದ ಕೆಲವೇ ದೇವಾಲಯಗಳಲ್ಲಿ ತೀರ್ಥರಾಮೇಶ್ವರವೂ ಒಂದು.
  • ಅನೆಕೊಂಡ:ಸುಂದರವಾದ ಹೊಯ್ಸಳ ಶೈಲಿಯ ಈಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಅನಗೋಡ್:ಸಿದ್ಧೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಬಲ್ಲೇಶ್ವರ:ತುಂಗಭದ್ರಾ ನದಿಯ ದಡದಲ್ಲಿರುವ ಹೊಯ್ಸಳ ಯುಗದ ಬಲ್ಲಾಳ ಲಿಂಗೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
  • ಹೊದಿಗೆರೆ:ಛತ್ರಪತಿ ಶಿವಾಜಿಯ ತಂದೆ ಶಾಹಜಿ ಭೋನ್ಸಾಲೆ ಸಮಾಧಿಗೆ ಹೆಸರುವಾಸಿಯಾಗಿದೆ. 
  • ಜೊಳಧಾಳು :ಅಂಬಾ ಭವಾನಿ ದೇವಾಲಯ ಇರುವ ಜೊಳಧಾಳು  ತೀರ್ಥಯಾತ್ರೆಯ ಕೇಂದ್ರ (ಇದನ್ನು ಕುಕ್ವಾಡಮ್ಮ ರೇಣುಕಾ ಎಂದೂ ಕರೆಯುತ್ತಾರೆ). ಇಲ್ಲಿ ಅಂಬಾ ಭವಾನಿ ದೇವಿಯು ಸಿಂಹದ ಮೇಲೆ ತ್ರಿಶೂಲ ಮತ್ತು ಡಮರುಗವನ್ನು ಕೈಯಲ್ಲಿ ಹಿಡಿದು ಕುಳಿತಿದ್ದಾಳೆ.
  • ಕಲ್ಕೆರೆ:ಬಲೇಶ್ವರ, ಕಲ್ಲೇಶ್ವರ ಮತ್ತು ಹನುಮಂತರಾಯ ದೇವಾಲಯಗಳಿರುವ ಕಲ್ಕೆರೆ ಕುದುರೆಯ ಲಾಳದ (ಪಾದದ) ಆಕಾರದ ಕಣಿವೆಗಾಗಿ ಹೆಸರುವಾಸಿಯಾಗಿದೆ
  • ಮಾಯಕೊಂಡ:ಓಬಳ ನರಸಿಂಹ ದೇವಸ್ಥಾನ ಮತ್ತು ಕೇಶವ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. 
  • ನಂದಿತಾವರೆ:ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾದ ಅಮೃತ ಮಾಣಿಕೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಮುಸಾಫಿರ್ ಖಾನಾ ಮಸೀದಿ: ಸಂತೆಬೆನ್ನೂರಿ‌ನಲ್ಲಿನ ಪ್ರಸಿದ್ಧ ಮಸೀದಿ.
  • ಶಂಕರನಹಳ್ಳಿ:ಸ್ಥಳೀಯವಾಗಿ ತಿರುವೆಂಗಲನಾಥ ಎಂದು ಕರೆಯಲ್ಪಡುವ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ವಿಜಯನಗರ ಯುಗದ ವಿನ್ಯಾಸ ಹೊಂದಿರುವ  ರಂಗನಾಥಸ್ವಾಮಿ ದೇವಸ್ಥಾನ ಮಾಯಕೊಂಡದಲ್ಲಿನ ದೇವಾಲಯಗಳ ಪ್ರತಿರೂಪವಾಗಿದೆ.