Close

ತಲುಪುವ ಬಗೆ

 ಸಾರಿಗೆ ಇಲಾಖೆ

ದಾವಣಗೆರೆಗೆ ತಲುಪುವುದು ಹೇಗೆ

ದಾವಣಗೆರೆ ಕರ್ನಾಟಕದ ಎಲ್ಲೆಡೆಯಿಂದ ಉತ್ತಮ ರೈಲು ಮತ್ತು ರಸ್ತೆ ಸಂಪರ್ಕ ಹೊಂದಿದೆ. ದಾವಣಗೆರೆ ಬೆಂಗಳೂರಿನ ವಾಯುವ್ಯಕ್ಕೆ 262 ಕಿ.ಮೀ. ದೂರದಲ್ಲಿದೆ.

ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು ದಾವಣಗೆರೆಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ (134 ಕಿ.ಮೀ)  ಆದರೆ ಸೀಮಿತ ವಿಮಾನಯಾನ ಸೇವೆಯನ್ನು ಹೊಂದಿದೆ. ಹುಬ್ಬಳ್ಳಿ 160 ಕಿ.ಮೀ ದೂರದಲ್ಲಿರುವ ಇನ್ನೊಂದು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ಮತ್ತು ಮಂಗಳೂರು ದಾವಣಗೆರೆಯಿಂದ ಸುಮಾರು 270-280 ಕಿ.ಮೀ ದೂರದಲ್ಲಿರುವ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ.

ದಾವಣಗೆರೆಯಲ್ಲಿ ರೈಲ್ವೆ ನಿಲ್ದಾಣ ಇದೆ ಮತ್ತು ಉತ್ತಮ ರೈಲು ಸಂಪರ್ಕ ಹೊಂದಿದೆ.

ಕರ್ನಾಟಕದ ಪ್ರಮುಖ ನಗರಗಳಿಂದ ದಾವಣಗೆರೆ ಅತ್ಯುತ್ತಮ ಬಸ್ ಸಂಪರ್ಕವನ್ನು ಹೊಂದಿದೆ.  ಕ. ರಾ.ರ.ಸಾ. ಸಂ (ಕೆಎಸ್‌ಆರ್‌ಟಿಸಿ) ಮತ್ತು ಖಾಸಗಿ ಬಸ್ ಸೇವೆ ಲಭ್ಯವಿದೆ

ಸ್ಥಳೀಯ ಪ್ರಯಾಣಕ್ಕೆ ಆಟೊಗಳು ಹೆಚ್ಚು ಸೂಕ್ತವಾಗಿವೆ. ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳನ್ನು ತಲುಪಲು ಪ್ರಮುಖ ಪಟ್ಟಣಗಳಾದ ದಾವಣಗೆರೆ, ಹರಿಹರ, ಹೊನ್ನಾಳಿ , ಚನ್ನಗಿರಿ  ಇತ್ಯಾದಿ ನಗರಗಳಿಂದ  ಕಾರು ಬಾಡಿಗೆಗೆ ಪಡೆಯಬಹುದಾಗಿದೆ.

ಐಷಾರಾಮಿ ವಸತಿಗಳು: 

ಅಪೂರ್ವ ರೆಸಾರ್ಟ್

ಸೌಥೆರ್ನ್ ಸ್ಟಾರ್ ದಾವಣಗೆರೆ

 ಅಶೋಕ್ ಇನ್   

ಮಧ್ಯಮ ಶ್ರೇಣಿಯ ವಸತಿ ಆಯ್ಕೆಗಳು: 

ಹೋಟೆಲ್ ನವೀನ

ಪೂಜಾ ಇಂಟರ್ನ್ಯಾಷನಲ್

ಹೋಟೆಲ್ ಸಾಯಿ ಇಂಟರ್ನ್ಯಾಷನಲ್

ಶ್ರೀಗಂಧ ರೆಸಿಡೆನ್ಸಿ