ದಾವಣಗೆರೆ
ಶಿವಮೊಗ್ಗ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಹಲವು ತಾಲೂಕುಗಳನ್ನು ಒಟ್ಟು ಸೇರಿಸಿ 1997 ರಲ್ಲಿ ದಾವಣಗೆರೆ ಜಿಲ್ಲೆ ಸ್ಥಾಪಿಸಲಾಯಿತು. ದಾವಣಗೆರೆ ಬೆಂಗಳೂರಿನಿಂದ ವಾಯುವ್ಯಕ್ಕೆ 260 ಕಿ.ಮೀ ದೂರದಲ್ಲಿದ್ದು ಕರ್ನಾಟಕದ ಮಧ್ಯ ಭಾಗದಲ್ಲಿದೆ.
ದಾವಣಗೆರೆ ಬೆಣ್ಣೆ ದೋಸೆ ಈ ಪ್ರದೇಶದ ಜನಪ್ರಿಯ ಉಪಾಹಾರವಾಗಿದೆ. ಶಾಂತಿಸಾಗರ, ಹರಿಹರ, ಕೊಂಡಜ್ಜಿ ಕೆರೆ, ಸಂತೆಬೆನ್ನೂರು ಪುಷ್ಕರಣಿ, ತೀರ್ಥರಾಮೇಶ್ವರ, ಗಾಜಿನ ಮನೆ, ಹಾಗೂ ದುಗ್ಗಮ್ಮ ದೇವಾಲಯ ದಾವಣಗೆರೆಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳು.
ದಾವಣಗೆರೆ ಹತ್ತಿ ಇಳುವರಿ ಮತ್ತು ಹತ್ತಿ ಮಗ್ಗ (ಮಿಲ್)ಗಳಿಗೆ ಹೆಸರುವಾಸಿಯಾಗಿದೆ.