ಸಂಸ್ಥೆ ನಕಾಶೆ
ಯಾವುದಕ್ಕೆ ಎಲ್ಲಿ ಸಂಪರ್ಕಿಸಬೇಕು?
ಜಿಲ್ಲಾ ಮಟ್ಟದ ಕಚೇರಿಗೆ ಜನರು ವಿವಿಧ ದೂರುಗಳನ್ನು ನೀಡುತ್ತಾರೆ ಹಾಗೂ ಈ ಸಮಯದಲ್ಲಿ ಯಾರನ್ನು ಸಂಪರ್ಕಿಸಬೇಕು ಮತ್ತು ಅವನ / ಅವಳ ಕೆಲಸವನ್ನು ಮಾಡಲು ಎಷ್ಟು ಬಾರಿ ಸಂಪರ್ಕಿಸಬೇಕು ಎಂಬುದು ತಿಳಿದಿರುವುದಿಲ್ಲ. ಇದಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯು ಅನೇಕ ಶಾಖೆಗಳನ್ನು ಹೊಂದಿದ್ದು , ಪ್ರತಿ ಶಾಖೆಯ ಕಾರ್ಯಚಟುವಟಿಕೆಗಳು ಒಂದಕ್ಕೊಂದು ಹೊಂದಾಣಿಕೆಯನ್ನು ಹೊಂದಿವೆ. ಅವು ಈ ಕೆಳಗಿನಂತಿವೆ.
ಆಡಳಿತ ಶಾಖೆ
ಆಡಳಿತಾತ್ಮಕ ವಿಭಾಗ ಹುದ್ದೆಯ ನೇಮಕಾತಿ, ಪಾವತಿ ಮತ್ತು ಭತ್ಯೆ, ವರ್ಗಾವಣೆ ಮತ್ತು ಭಡ್ತಿ, , ನಿವೃತ್ತಿಗಳು, ಶಿಸ್ತುಕ್ರಮ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿಗಳು), ವೈಯಕ್ತಿಕ ಠೇವಣಿ ಖಾತೆಗಳು, ಲೆಕ್ಕಪರಿಶೋಧನಾ ವರದಿಗಳು, ಜಿಲ್ಲಾಧಿಕಾರಿಯವರ ದಿನಚರಿ ಮತ್ತು ವ್ಯವಹಾರ ಅಂಕಿಅಂಶಗಳು ಸಂಬಂಧಿಸಿದ ವಿಷಯಗಳ ಕುರಿತು ವ್ಯವಹರಿಸುತ್ತದೆ.
ಕಂದಾಯ ಶಾಖೆ
ಕಂದಾಯ ಶಾಖೆಯು ಮುಖ್ಯವಾಗಿ ಜಮಾಬಂದಿ, ಡಿ.ಸಿ.ಬಿ (ಡಿಮ್ಯಾಂಡ್ ಕಲೆಕ್ಷನ್ & ಬ್ಯಾಲೆನ್ಸ್), ಭೂ ಸುಧಾರಣೆ, ಭೂಸ್ವಾಧೀನ , ಭೂಪರಿವರ್ತನೆ , ಪಿಟಿಸಿಎಲ್, ಕಂದಾಯ ಮೇಲ್ಮನವಿಗಳು, ಗಣಿಗಳು ಮತ್ತು ಖನಿಜಗಳು ಮತ್ತು ಸರಕಾರಿ ಸ್ಥಳಗಳಆಕ್ರಮಣಗಳನ್ನು ನಿಯಂತ್ರಿಸುವ ವಿಷಯಗಳ ಕುರಿತು ವ್ಯವಹರಿಸುತ್ತದೆ.
ಚುನಾವಣಾ ಶಾಖೆ
ಈ ವಿಭಾಗವು ಲೋಕಸಭೆ, ವಿಧಾನಸಭೆ, ವಿಧಾನಪರಿಷತ್, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸ್ಥಳೀಯ ಸಂಸ್ಥೆಗಳು, ಎಪಿಎಂಸಿ, ಮತ್ತು ಇತರ ಸಹಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ಚುನಾವಣಾ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ.
ನಗರಾಭಿವೃದ್ದಿ ಕೋಶ
ಈ ವಿಭಾಗವು ಮುನ್ಸಿಪಲ್ ಸೇವಾ ವಿಷಯಗಳೂ ಸೇರಿದಂತೆ ಎಲ್ಲಾ ಪುರಸಭೆಯ ವಿಷಯಗಳ ಬಗ್ಗೆ, ಎಸ್.ಜೆ.ಎಸ್.ಆರ್.ವೈ (ಸ್ವರ್ಣ ಜಯಂತಿ ಷಹರಿ ರೋಜ್ಗಾರ್ ಯೋಜನಾ), ಐಡಿಎಸ್ಎಮ್ಟಿ (ಸಣ್ಣ ಮತ್ತು ಮಧ್ಯದ ಪಟ್ಟಣಗಳ ಸಂಯೋಜಿತ ಅಭಿವೃದ್ಧಿ), ನೀರು ಸರಬರಾಜು ಯೋಜನೆಗಳು, ವಸತಿ ಯೋಜನೆಗಳು ಮತ್ತು ಕೊಳಚೆ ಪ್ರದೇಶ ಅಭಿವೃದ್ಧಿ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ.
ಧಾರ್ಮಿಕ ದತ್ತಿ ಶಾಖೆ
ಈ ವಿಭಾಗವು ಮುಜರಾಯಿ ದೇವಸ್ಥಾನಗಳ ನಿರ್ಮಾಣ ಮತ್ತು ನವೀಕರಣದ ಬಗ್ಗೆ, ಧರ್ಮದರ್ಶಿಯರನ್ನು ನೇಮಕ ಮಾಡಿಕೊಳ್ಳುವುದು ಮತ್ತು ಅರ್ಚಕರ (ತಸ್ತೀಕು ಮತ್ತು ವರ್ಷಾಸನ ) ಸಂಬಳ, ಆರಾಧನ ಯೋಜನೆಗಳಿಗೆ ಪಾವತಿ ಇತ್ಯಾದಿ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ.
ದಂಡನಾ ಶಾಖೆ
ಈ ವಿಭಾಗವು ಕಾನೂನು ಮತ್ತು ಆದೇಶ (ಸೆಕ್ಷನ್ 144 ಇತ್ಯಾದಿ), ನ್ಯಾಯಾಧೀಶ ವಿಷಯಗಳಾದ ಪ್ರಾಕೃತಿಕ ವಿಕೋಪ, ನಕ್ಸಲ್ ಪ್ರದೇಶಾಭಿವೃದ್ದಿ, ಎಲ್ಲಾ ಪರೀಕ್ಷೆಗಳು ಕೋವಿ ಪರವಾನಿಗೆ ಮತ್ತು ಮದ್ದುಗುಂಡುಗಳು ಮತ್ತು ಸಿನೆಮಾಗಳ ಪರವಾನಿಗೆಗಳ ಬಗ್ಗೆ ವ್ಯವಹರಿಸುತ್ತದೆ.
ಇತರೆ ಶಾಖೆ
ಈ ವಿಭಾಗ ಎನ್.ಎಸ್.ಎ.ಪಿ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ , ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಇತರ ಯೋಜನೆಗಳನ್ನು ವ್ಯವಹರಿಸುತ್ತದೆ. ಮಾತ್ರವಲ್ಲದೆ, ಸಭೆಯ ಅಂಕಿಅಂಶಗಳು, ಲೋಕೋಪಯೋಗಿ ಕೆಲಸಗಳು, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು, ಮನೆ ತೆರಿಗೆ ನಿಯಂತ್ರಣ (HRC) ಮತ್ತು ಇತರ ಕಂದಾಯ ಇಲಾಖೆಯ ವಿಷಯಗಳ ಬಗ್ಗೆ ಸಹ ವ್ಯವಹರಿಸುತ್ತದೆ.