ಕೋವಿಡ್ 19 ಬಗ್ಗೆ :
2019 -ಎನ್ ಕೋವ್ ಅಥವಾ 2019 ನಾವೆಲ್ ಕರೋನಾ ವೈರಸ್ ಕೋವಿಡ್ -19 ಎಂದೂ ಕರೆಯಲ್ಪಡುವ ಈ ವೈರಸ್ ಮೊದಲಿಗೆ ಚೈನಾದ ವುಹಾನ್ ನಗರದಲ್ಲಿ ಡಿಸೆಂಬರ್ 2019 ರಲ್ಲಿ ಗುರುತಿಸಲ್ಪಟ್ಟಿತು. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ಯಾಂಡಿಮೀಕ್(ಸಾಂಕ್ರಾಮಿಕ) ಕಾಯಿಲೆ ಎಂದು ಗುರುತಿಸಿ 11 ಮಾರ್ಚ್ 2020 ರಂದು ಘೋಷಿಸಿದೆ. ಕೋವಿಡ್ 2019 ಕರೋನಾ ವೈರಸ್ ಗುಂಪಿಗೆ ಸೇರಿದ ಈ ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ.
ಅರಿಯಿರಿ :
ಈ ವೈರಸ್ ಪ್ರಮುಖವಾಗಿ ಸೋಂಕುಳ್ಳ ವ್ಯಕ್ತಿಯ ಸಂಪರ್ಕದಲ್ಲಿದ್ದಾಗ ಅವರುಗಳ ಕೆಮ್ಮು ಅಥವಾ ಸೀನಿನಿಂದ ಆ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಆದ್ದರಿಂದ ಸಾಮಾಜಿಕ ಅಂತರ ಕಾಯ್ದಿಟ್ಟುಕೊಳ್ಳುವ ಮೂಲಕ (ಅಂದರೆ ಕನಿಷ್ಟ ಆರು ಫೀಟ್ ಅಂತರ) ಮತ್ತು ಕೆಮ್ಮುವಾಗ ಕೈಯ್ಯನ್ನು ಬಾಯಿಗೆ ಅಡ್ಡ ಹಿಡಿದುಕೊಳ್ಳುವ ಮೂಲಕ ಈ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿದೆ.
ಮುನ್ನೆಚ್ಚರಿಕೆ :
- ಆಗಾಗ ಕನಿಷ್ಠ 20 ಸೆಕೆಂಡ್ ಗಳ ಕಾಲ ಸೊಪಿನಿಂದ ಕೈ ಗಳನ್ನು ತೊಳೆಯುವುದು.
- ಯಾವುದಾದರೂ ಹೊರಗಿನ ವಸ್ತುಗಳನ್ನ ಮುಟ್ಟಿದ ನಂತರ ಕೂಡಲೆ ಸ್ಯಾನಿಟೈಜರ್ಗಳನ್ನ ಬಳಸಿ ನಿಮ್ಮ ಕೈಗಳನ್ನು ಉಜ್ಜಿಕೊಳ್ಳಿ
- ಕೈ ತೊಳೆಯದೆ ನಿಮ್ಮ ಮುಖ ( ಕಣ್ಣು , ಮೂಗು, ಬಾಯಿ) ಇವುಗಳನ್ನು ಮುಟ್ಟುವುದನ್ನು ತಡೆಯಿರಿ
- ಮನೆಯಲ್ಲಿಯೇ ಇರಿ ಮತ್ತು ಕಾಯಿಲೆ ಇರುವ ವ್ಯಕ್ತಿಗಳ ಜೊತೆ ಅತಿ ಹತ್ತಿರದ ಸಂಪರ್ಕ ಬೇಡ
- 60 ವರ್ಷ ಮೇಲ್ಪಟ್ಟ ಮತ್ತು ಹತ್ತು ವರ್ಷದ ಕೆಳಗಿನವರುಗಳು ಈ ವೈರಸ್ ಸೋಂಕಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ವಯಸ್ಸಿನವರ ಜೊತೆ ಹತ್ತಿರದ ಸಂಪರ್ಕವನ್ನು ತಡೆಯುವುದು ಉತ್ತಮ
- ಕೆಮ್ಮುವಾಗ ಅಥವ ಸೀನುವಾಗ ಟಿಶ್ಯೂ ವನ್ನು ಅಡ್ಡ ಹಿಡಿದುಕೊಂಡರೆ ಆ ಕೂಡಲೇ ಅವುಗಳನ್ನು ಒಂದು ಸಣ್ಣ ಚೀಲದಲ್ಲಿ ಕಟ್ಟಿ ಪ್ರತ್ಯೇಕವಾಗಿ ಎಸೆಯಿರಿ.
- ನಿಮ್ಮ ಮನೆ, ಆಫೀಸಿನ ಸೋಫಾಗಳನ್ನು, ಟೇಬಲ್, ಬಾಗಿಲು, ಬಾಗಿಲಿನ ಹಿಡಿಕೆ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗಾಗ ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುತ್ತಿರಿ.
- ಕೊರಿಯರ್ ಅಥವಾ ಯಾವುದೇ ಪಾರ್ಸೆಲ್ ಪಡೆಯುವಾಗ ಸಾಧ್ಯವಿದ್ದಲ್ಲಿ ಅವುಗಳನ್ನು ಒಂದೆಡೆ ಇರಿಸಲು ಹೇಳಿ. ಕೈಗಳಿಂದ ಪಡೆಯವುದನ್ನು ಆದಷ್ಟೂ ತಪ್ಪಿಸಿ ತೊಳೆಯುವಂತಹುದಾದರೆ ತೊಳೆದು ತೆಗೆದಕೊಳ್ಳಿ ಇಲ್ಲವಾದಲ್ಲಿ ಸ್ವಲ್ಪ ಘಂಟೆಗಳ ಕಾಲ ಮುಟ್ಟದೇ ಹಾಗೆಯೇ ಇಟ್ಟು ನಂತರ ಪಾರ್ಸೆಲ್ ಅಥವಾ ಕೊರಿಯರ್ ತೆರೆಯಬಹುದು